Vidyamana Kannada News

ಪರಿಸರ ಸಂರಕ್ಷಣೆ ಪ್ರಬಂಧ ಕನ್ನಡದಲ್ಲಿ | Parisara Samrakshane Essay in Kannada

0

ಪರಿಸರ ಸಂರಕ್ಷಣೆ ಪ್ರಬಂಧ ಕನ್ನಡದಲ್ಲಿ Parisara Samrakshane Essay in kannada essay on environment Parisara Prabndha in Kannada Environment Protection Essay in Kannada ಪರಿಸರದ ಮೇಲಿನ ಪ್ರಬಂಧ ಪರಿಸರ ಸಂರಕ್ಷಣೆ ಪ್ರಬಂಧ Essay About Environmental Protection in Kannada

ಪರಿಸರ ಸಂರಕ್ಷಣೆ ಪ್ರಬಂಧ

ಪೀಟಿಕೆ:

ಪರಿಸರ ಎಂದರೆ ನಮ್ಮ ಸುತ್ತಮುತ್ತಲಿನ ವಾತವರಣದಲ್ಲಿನ ಗಾಳಿ, ಬೆಳಕು, ನೀರು ಹಾಗೂ ಮತ್ತಿತರ ಅಂಶಗಳು. ಇವುಗಳನ್ನು ಮಾನವ ಚಟುವಟಿಕೆ ಹಾಗೂ ಕೆಲ ನೈಸಗಿಕ ವಿಕೊಪಗಳಿಂದ ರಕ್ಷಿಸುವುದೆ ಪರಿಸರ ಸಂರಕ್ಷಣೆ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಪ್ರತಿ ವರ್ಷ ಜೂನ್‌ 5 ರಂದು ಪರಿಸರ ದಿನಾಚರಣೆಯನ್ನು ಆಚರಿಸಲಗುತ್ತದೆ. ಇಂದಿನ ವಿದ್ಯಾಮಾನಗಳಲ್ಲಿ ಪರಿಸರ ನಾಶವಾಗುತ್ತಿರುವುದು ದುಸ್ತರವೇ ಸರಿ. ನಮ್ಮ ಪರಿಸರ ರಕ್ಷಣೆಯ ಜವಾಬ್ದಾರಿ ನಮ್ಮ ಮೇಲಿ ನಿಂತಿದೆ.

ವಿಷಯ ಮಂಡನೆ:

ಇಂದಿನ ದಿನಗಳಲ್ಲಿ ಪರಿಸರವು ಮಾನವ ಹಾಗು ಇನ್ನಿತರ ಚಟುವಟಿಕೆಗಳಿಂದ ಹಾಳಾಗುತ್ತಿರುವುದು ತೀರ ಅಪಾಯಕಾರಿಯಾದ ವಿಷಯವಾಗಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಬೆಳಕು ಹಾಗು ವಾತವರಣವು ಮಲಿನಗೊಳ್ಳುತ್ತದೆ. ಮಲಿನಗುಳ್ಳುವುದರಿಂದ ಭೂಮಿಯಲ್ಲಿನ ಮಾನವ ಜೀವನ ಹಾಗೂ ಇನ್ನಿತರ ಜೀವಿಗಳ ಜೀವನವು ಕಷ್ಟವಾಗುತ್ತದೆ. ಪರಿಸರ ಸಂರಕ್ಷಣೆ ಮಾದದೆ ಹೋದರೆ ಮಂದಿನ ಪೀಳಿಗೆಗಳು ಕಷ್ಟ ಅನುಭವಿಸಬೆಕಾಗುತ್ತದೆ.

ಪರಿಸರವು ಅನೇಕ ವಿಧಗಳಿಂದ ಹಾಳಗುತ್ತಿದೆ ಅವೆಂದರೆ ಮರ ಕಡಿಯುವುದರಿಂದ, ಬಳಕೆಗೆ ಬಾರದ ಪಾದಾರ್ಥಗಳನ್ನು ಮಣ್ಣಿನಲ್ಲಿ ಎಸೆಯುವುದರಿಂದ, ಒಣ ಕಸಗಳನ್ನು ಸುಡುವುದರಿಂದ, ಅತೀಯಾದ ವಾಹನ ಬಳಕೆಯಿಂದ ಮುಂತಾದುವುಗಾಳಿಂದ ಪರಿಸರ ಹಾಳಗುತ್ತಿದೆ.

ಪರಿಸರ ಸಂರಕ್ಷಣೆ ಎಂದರೇನು?

ಪರಿಸರ ಸಂರಕ್ಷಣೆ ಎಂದರೆ ಮಾನವ ಹಾಗು ನೈಸರ್ಗಿಕ ವಿಕೋಪಗಳಿಂದ ಪರಿಸರ ಹಾಗು ಪರಿಸರ ಪ್ರಭೆಧಗಳನ್ನು ರಕ್ಷಿಸುವುದು ಮತ್ತು ಪರಿಸರ ನಾಶದಂತಹ ಕಾರ್ಯಗಳನ್ನು ತಡೆಯುವುದು ಎಂದರ್ಥ.

ಪರಿಸರ ರಕ್ಷಣೆಗೆ ಕೆಲವು ಮಾರ್ಗಗಳನ್ನು ಅನುಸರಿಸಬೇಕಾಗಿದೆ ಅವಗಳೆಂದರೆ:

ಸರಿಯಾದ ರೀತಿಯಲ್ಲಿ ಕಾನೂನು ಪಾಲನೆ ಮಾಡುವುದು:ಸರ್ಕಾರವು ನೀಡಿರುವ ಕಾನೂನನ್ನು ಸರಿಯಾದ ಕ್ರಮದಲ್ಲಿ ಅನುಸರಿಸಬೇಕು. ಸರ್ಕಾರದ ಆದೇಶದಂತೆ ಪರಿಸರ ರಕ್ಷಣೆ ನಿಯಮಗಳನ್ನು ಪಾಲಿಸಬೇಕು. ಕಾನೂನು ಬಾಹೀರ ಕೆಲಸಗಳನ್ನು ವಿರೋಧಿಸುವ ಮೂಲಕ ಪರಿಸರ ಉಳಿವಿಗೆ ಎಚ್ಚೆತ್ತುಕೊಳ್ಳಬೇಕಿದೆ.

ಪರಿಸರ ರಕ್ಷಣೆಯ ಕುರಿತಾದ ಜಾಗೃತಿ ಮೂಡಿಸುವುದು: ಜನರಲ್ಲಿ ಪರಿಸರದ ಕುರಿತಾದ ಕಾಳಜಿಯನ್ನು ಮನೋಭಾವನೆಯನ್ನು ಮೂಡಿಸಬೇಕು .ಪರಿಸರ ರಕ್ಷಣೆಯ ಕುರಿತಾದ ಕಾರ್ಯಕ್ರಮಗಳ ಮೂಲಕ ಪರಿಸರದ ಮಹತ್ವವನ್ನು ತಳಿಸಿ ಕೊಡಬೆಕಾಗಿದೆ.ಪರಿಸರ ರಕ್ಷಣೆ ಕೇವಲ ನಾವು ಮಾತ್ರ ಅನುಸರಿಸದೆ ಎಲ್ಲತರಲ್ಲೂ ಬೆಳಸಬೇಕಾಗಿದೆ.

ಮರಗಳನ್ನು ಬೆಳಸುವುದು: ಪರಿಸರ ದಿನಾಚರಣೆ,ಆಂದೋಲನಗಳು ಇತ್ಯಾದಿ ಮೂಲಕ ಗಿಡ ಮರಗಳನ್ನು ನೆಟ್ಟು ಬೆಳಸಬೇಕು ಹಾಗೂ ಅವುಗಳನ್ನು ಪೋಶಿಸಬೆಕು. ಹೀಗೆ ಮಾಡುವುದರಿಂದ ಪರಿಸರ ಸಮತೋಲನ ಉಂಟಾಗುತ್ತದೆ. ಗಿಡಮರಗಳ ಹೆಚ್ಚಳದಿಂದ ಪರಿಸರ ಶುದ್ಧೀಕರಣವಾಗುತ್ತದೆ.

ವಾಹನ ಬಳಕೆಯನ್ನು ತಗ್ಗಿಸುವುದು: ಅತೀಯಾದ ವಾಹನ ಬಳಕೆಯು ಮಾಲಿನ್ಯಗಳಿಗೆ ಕಾರಣವಾಗುತ್ತಿರುವುರಿಂದ ವಾಹನ ಬಳಕೆಯನ್ನು ತಗ್ಗಿಸಬೇಕಾಗಿದೆ . ಇಲ್ಲವಾದರೆ ವಾಯು ಮಾಲಿನ್ಯ ಹಾಗೂ ಶಬ್ಧ ಮಾಲಿನ್ಯದ ಪರಿಣಾಮವಾಗಿ ಪರಿಸರ ಅಸಮತೋಲನ ಉಂಮಟಾಗುವ ಅಪಾಯವಿದೆ. ವಾಹನಗಳ ಬದಲಿಗೆ ನೆಡೆಯುವ ಮೂಲಕ ಅಥವಾ ಸೈಕಲ್‌ಗಳನ್ನು ಬಳಸಬೇಕು.

ಹಸಿರು ಮನೆ ಅನೀಲಗಳ ನಿರ್ವಹಣೆ ಮಾಡಬೇಕು : ಹೆಚ್ಚುತ್ತಿರುವ ವಾತಾವರಣದ ತಾಪಮಾನದಿಂದಾಗಿ ಪರಿಸರದಲ್ಲಿಅಸಮತೋಲನ ಉಂಟಾಗುತ್ತಿದೆ. ಇದರಿಂದ ಪರಿಸರ ಹಾನಿಗೊಳಗಾಗುತ್ತಿದೆ ಇದು ಅಪಾಯದ ಮುನ್ಸೂಚನೆಯಾಗಿದೆ. ಹಸಿರುಮನೆ ಅನೀಲಗಳು ಹೆಚ್ಚಾಗಿ ರೆಪ್ರಿಜೆರೇಟರ,ಏಸಿ,ಫ್ರಿಡ್ಜ್‌, ಮುಂತಾದುವುಗಳನ್ನು ಬಳಸುವುದರಂದ ಉಂಟಾಗುತ್ತಿದೆ. ಇವುಗಳನ್ನು ನಿಯಮಿತವಾಗಿ ಬಳಸಬೇಕು.

ನಗರೀಕರಣವನ್ನು ತಡೆಗಟ್ಟುವುದು: ಹೆಚ್ಚುತ್ತಿರುವ ನಗರೀಕರಣಸದಿಂದಾಗಿಯೂ ಸಹ ಪರಿಸರ ನಾಶವಾಗುತ್ತಿದೆ . ನಗರೀಕರಣದಿಂದ ಪರಿಸರದ ನಾಶ ಹಾಗೂ ಪರಿಸರ ನಾಶಕ್ಕೆ ಕಾರಣವಾಗುವಂಹ ಅಂಶಗಳು ಸಹ ಉಂಗುತ್ತಿವೆ. ನಗರೀಕರಣವು ಪರಿಸರ ಸಂರಕ್ಷಣೆಗೆ ವಿರುದ್ಧವಾದುದಾಗಿದೆ.

ಇನ್ನು ಹತ್ತು ಹಲವು ಕಾರಣಗಳಿಂದಾಗಿ ಪರಿಸರ ನಾಶವಾಗುತ್ತಿದೆ . ಹೀಗೆ ನಾಶವಾಗುತ್ತಿರುವ ಪರಿಸರವನ್ನು ಉಳಿಸಿ ಬೆಳಸಬೇಕಾಗಿದೆ ಇಲ್ಲವಾದರೆ ಮುನುಷ್ಯ ಹಾಗು ಉಳಿದ ಜೀವಿಗಳ ಉಳಿವು ಸಾದ್ಯವಾಗುವುದಿಲ್ಲ . ಪರಿಸರವನ್ನು ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರವು ಬರೀ ಮನುಷ್ಯರಿಗಲ್ಲದೆ ಉಳಿದ ಜೀವಿಗಳಿಗೂ ಸಂಬಂಧಿಸಿದ್ದು ಎಂದು ಅರಿತುಕೊಳ್ಳಬೇಕಿದೆ.

ಉಪಸಂಹಾರ:

ನಾವೆಲ್ಲರು ಪರಿಸರದ ಅನನ್ಯತೆಯನ್ನು ಅರಿತು ಉಳಿಸಿ ಬೆಳಸಬೇಕಿದೆ. ಸ್ವಚ್ಛಂದ ಪರಿಸರ ಬರೀ ನಮಗಲ್ಲದೆ ನಮ್ಮ ಮುಂದಿನ ಪೀಳಿಗೆಗೂ ಅದನ್ನು ಪರಿಚಯಿಸಬೇಕು. ಪ್ರತೀ ವರ್ಷ ನೆಪಮಾತ್ರಕ್ಕೆ ಜೂನ್‌ 5ರಂದು ಪರಿಸರ ದಿನಾಚರಣೆಯನ್ನು ಆಚರಿಸದೆ ಜೀವನವಿಡೀ ಅದನ್ನು ಪಾಲಿಸಬೇಕು. ನಮ್ಮ ಪರಿಸರವನ್ನು ನಾವು ರಕ್ಷಿಸದೆ ಇನ್ಯಾರು ರಕ್ಷಿಸಲಾರರು.ಪರಿಸರಕ್ಕೆ ಹಾನಿಯುಂಟು ಮಾಡುತ್ತಿರುವ ಅಂಶಗಳನ್ನು ದೂರವಿಡಬೇಕು.ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಪರಿಸರ ಉಳಿವಿಗೆ ಹೋರಾಡೋಣ

“ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ”

FAQ

ಪರಿಸರ ಸಂರಕ್ಷಣೆ ಎಂದರೇನು?

ಪರಿಸರ ಸಂರಕ್ಷಣೆ ಎಂದರೆ ಮಾನವ ಹಾಗು ನೈಸರ್ಗಿಕ ವಿಕೋಪಗಳಿಂದ ಪರಿಸರ ಹಾಗು ಪರಿಸರ ಪ್ರಭೆಧಗಳನ್ನು ರಕ್ಷಿಸುವುದು ಮತ್ತು ಪರಿಸರ ನಾಶದಂತಹ ಕಾರ್ಯಗಳನ್ನು ತಡೆಯುವುದು ಎಂದರ್ಥ.

ಪರಿಸರ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ?

ಪ್ರತಿ ವರ್ಷ ಜೂನ್‌ 5 ರಂದು ಪರಿಸರ ದಿನಾಚರಣೆಯನ್ನು ಆಚರಿಸಲಗುತ್ತದೆ.

ಪರಿಸರ ಎಂದರೇನು?

ಪರಿಸರ ಎಂದರೆ ನಮ್ಮ ಸುತ್ತಮುತ್ತಲಿನ ವಾತವರಣದಲ್ಲಿನ ಗಾಳಿ, ಬೆಳಕು, ನೀರು ಹಾಗೂ ಮತ್ತಿತರ ಅಂಶಗಳು.

ಇತರೆ ವಿಷಯ

ಗ್ರಂಥಾಲಯದ ಮಹತ್ವ ಕುರಿತು ಪ್ರಬಂಧ

Leave A Reply
rtgh