Vidyamana Kannada News

ಅನ್ನಭಾಗ್ಯ ಯೋಜನೆಗೆ ಮುಹೂರ್ತ ಫಿಕ್ಸ್:‌ ಜುಲೈ 10 ರಂದು ಫಲಾನುಭವಿಗಳ ಅಕೌಂಟ್‌ಗೆ ಬೀಳಲಿದೆ ಹಣ, ದುಡ್ಡು ಪಡೆಯಲು ಏನು ಮಾಡಬೇಕು?

0

ಆತ್ಮೀಯ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಹೊಸ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಅನ್ನಭಾಗ್ಯ ಯೋಜನೆಯನ್ನು ಜುಲೈ 10 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ. ಅನ್ನಭಾಗ್ಯ ಯೋಜನೆಯಲ್ಲಿ ಯಾರಿಗೆಲ್ಲಾ ಹಣ ಬರಲಿದೆ? ಸರ್ಕಾರವು ಹಲವಾರು ಕಂಡೀಷನ್ಸ್‌ ಮೇಲೆ ಈ ನಿಯಮವನ್ನು ಜಾರಿಗೆ ತಂದಿದೆ. ಯಾವೆಲ್ಲಾ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ನೀಡಲಾಗಿದೆ , ಕೊನೆಯವರೆಗೂ ಓದಿ.

Annabhagya Yojana release date fix

ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಮುಹೂರ್ತ ಫಿಕ್ಸ್:‌ ಜುಲೈ 10 ರಂದು ಫಲಾನುಭವಿಗಳ ಅಕೌಂಟ್‌ಗೆ ಬೀಳಲಿದೆ ಹಣ, 5 ಕೆಜಿ ಅಕ್ಕಿಯ ಬದಲು ಖಾತೆಗೆ ಹಣ ನೀಡಲು ಮಾರ್ಗಸೂಚಿ ರಿಲೀಸ್‌ ಆಗಿದೆ. ಹಲವು ಕಂಡೀಷನ್ಸ್‌ ಹಾಕಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದ ಸಿದ್ದರಾಮಯ್ಯ ಸರ್ಕಾರ. ಅಂತ್ಯೋದಯ ಕಾರ್ಡ್‌ ನಲ್ಲಿ 3 ಜನಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಹಣ. 3 ತಿಂಗಳಿನಿಂದ ರೇಷನ್‌ ಪಡೆಯದೇ ಇದ್ದರೆ ಅಂತಹ ವರ ಖಾತೆಗೆ ಹಣ ಬರಲ್ಲಾ.

ಅನ್ನಭಾಗ್ಯ ಯೋಜನೆಗೆ ಈಗಾಗಲೇ ರಾಜ್ಯ ಸರ್ಕಾರ ಸಿದ್ದತೆಯನ್ನು ಮಾಡಿಕೊಂಡಿದೆ. ಆಹಾರ ಇಲಾಖೆಯಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಕಾರ್ಡ್‌ ಹೊಂದಿರುವ ಕುಟುಂಬಕ್ಕೆ ಈಗ ಎಷ್ಟು ಹಣ ಜಮಾ ಮಾಡಬೇಕು ಹಾಗೂ ಕಾರ್ಡ್‌ ನಲ್ಲಿರುವ ಯಾರ ಅಕೌಂಟ್‌ ಗೆ ಹಣವನ್ನು ಜಮಾ ಮಾಡಬೇಕು. ಯಾವ ಮಾನದಂಡದ ಮೇಲೆ ಹಾಕಬೇಕು ಎಂಬ ವಿಚಾರವಾಗಿ ಈಗ ಲಿಸ್ಟ್‌ ರೆಡಿ ಮಾಡಿಕೊಂಡ ರಾಜ್ಯ ಸರ್ಕಾರ.

ಇದನ್ನೂ ಓದಿ: ಕರ್ನಾಟಕ ಬಜೆಟ್ ಗುಡ್‌ ನ್ಯೂಸ್: ಇ-ಕಾಮರ್ಸ್ ವಿತರಣಾ ಉದ್ಯೋಗಿಗಳಿಗೆ ಸಿಗಲಿದೆ ₹ 4 ಲಕ್ಷ, ಬಜೆಟ್‌ನಿಂದ ಸಿಕ್ತು ಬಂಪರ್‌ ಲಾಟ್ರಿ

ಅನ್ನಭಾಗ್ಯ ಯೋಜನೆಗೆ ಈಗ ಫಲಾನುಭವಿಗಳ ಮಾರ್ಗಸೂಚಿಯನ್ನು ಆಹಾರ ಇಲಾಖೆ ಬಿಡುಗಡೆ ಮಾಡಿದೆ. ಸರ್ಕಾರ 5 ಕೆಜಿ ಅಕ್ಕಿ ಬದಲು ಹಣ ವನ್ನು ಅಕೌಂಟ್‌ಗೆ ನೇರವಾಗಿ ಜಮಾ ಮಾಡುತ್ತದೆ. ಈಗಾಗಲೇ ರಾಜ್ಯ ಸರ್ಕಾರ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ.

ಮಾರ್ಗಸೂಚಿಗಳು:

ಮಾರ್ಗ ಸೂಚಿಯ ಪ್ರಕಾರಾ ಬಿಪಿಎಲ್‌ ಹಾಗೂ ಅಂತ್ಯೋದಯ ಕಾರ್ಡ್‌ ಗೆ ಯಾರೆಲ್ಲಾ ಆಧಾರ್‌ ಕಾರ್ಡ್‌ ನಂಬರ್‌ ಅನ್ನು ಲಿಂಕ್‌ ಮಾಡಿರುತ್ತಾರೋ ಅಂತಹವರ ಖಾತೆಗೆ ಹಣ ಬರಲಿದೆ. ಆದಾರ್‌ ಹಾಗೂ ರೇಷನ್‌ ಕಾರ್ಡ್‌ ಲಿಂಕ್‌ ಆದ ಕಾರ್ಡ್‌ ನವರಿಗೆ ಮಾತ್ರ ಸರ್ಕಾರದಿಂದ ಉಚಿತ ಹಣ ಅವರ ಖಾತೆಗೆ ಬೀಳಲಿದೆ.

ಇನ್ನೂ ಯಾರೆಲ್ಲಾ ರೇಷನ್‌ ಕಾರ್ಡ್‌ ಗೆ ಆಧಾರ್‌ ಕಾರ್ಡ ಸಂಖ್ಯೆಯನ್ನು ಲಿಂಕ್‌ ಮಾಡಿಕೊಳ್ಳಲು ಸರ್ಕಾರ ಸೂಚಿಸಿದೆ. 5 ಕೆ.ಜಿ ಅಕ್ಕಿಯ ಬದಲಿಗೆ ಒಬ್ಬರಿಗೆ 170 ರೂಪಾಯಿಗಳನ್ನು ಅವರ ಖಾತೆಗೆ ಹಾಕುವುದಾಗಿ ಘೋಷಿಸಿದೆ.

ಕುಟುಂಬದ ಮುಖ್ಯಸ್ಥರ ಖಾತೆಗೆ ಹಣವನ್ನು ಹಾಕಲು ಸಿದ್ದತೆಯನ್ನು ಮಾಡಲಾಗಿದೆ. ಪಡಿತರ ಕಾರ್ಡ್‌ ಇದ್ದರೂ ಕೂಡ ಸಾಕಷ್ಟು ಜನ ಪಡಿತರವನ್ನು ತೆಗೆದುಕೊಳ್ಳುವುದಿಲ್ಲ ಅಂತಹ ವರಿಗೆ ಹಣ ಬರುವುದಿಲ್ಲ. 3 ತಿಂಗಳ ಹಿಂದೆಯಿಂದ ಅಕ್ಕಿ ತೆಗೆದುಕೊಳ್ಳದಿರುವಂತಹ ಕಾರ್ಡ್‌ ಗಳಿಗೂ ಕೂಡ ಹಣ ಬರುವುದಿಲ್ಲ. ಎಂದು ಸರ್ಕಾರ ಆದೇಶವನ್ನು ಹೊರಡಿಸಿದೆ.

ಅಂತ್ಯೋದಯ ಕಾರ್ಡ್‌ನಲ್ಲಿ 3 ಜನ ಅಥವಾ 3 ಜನಕ್ಕಿಂತ ಕಡಿಮೆ ಇರುವ ಜನರ ಖಾತೆಗೆ ಹಣ ಹಾಕುವುದಿಲ್ಲ ಎಂದ ಸರ್ಕಾರ. ಏಕೆಂದರೆ ಅಂತ್ಯೋದಯ ಕಾರ್ಡ್‌ ಹೊಂದಿರುವ ಜನರಿಗೆ ಈಗಾಗಲೇ ಅಂತ್ಯೋದಯ ಯೋಜನೆಯಡಿಲ್ಲಿ 3 ಜನ ಅಥವಾ 3 ಜನಕ್ಕಿಂತ ಕಡಿಮೆ ಇರುವ ಕಾರ್ಡ್‌ ಗಳಿಗೆ ಈಗಾಗಲೇ 35 ಕೆಜಿ ಅಕ್ಕಿಯನ್ನು ಕೊಡಲಾಗುತ್ತಿದೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಯಾವ ರೀತಿ ಹಣವನ್ನು ಹಾಕಲಾಗುತ್ತದೆ ಎಂದರೆ 35*5 ಎಂಬ ಲೆಕ್ಕಾಚಾರದಲ್ಲಿ ಹಣವನ್ನು ಪ್ರತಿಯೊಂದು ಕಾರ್ಡ್‌ ಗಳಿಗೆ ಹಣ ವನ್ನು ಜಮಾ ಮಾಡಲಾಗುತ್ತದೆ.

ಇತರೆ ವಿಷಯಗಳು:

ಬಜೆಟ್‌ ನಲ್ಲಿ ಸಿಕ್ತು ವಿದ್ಯಾರ್ಥಿಗಳಿಗೆ ಬಂಪರ್‌ ಸುದ್ದಿ: ಅರಿವು ಯೋಜನೆ, ವಿದ್ಯಾಸಿರಿಗೆ ಸಿಕ್ತು ಮರುಚಾಲನೆ; ಎಂದಿನಿಂದ ಜಾರಿ?

ಕೃಷಿಕರಿಗೆ ಬಿಗ್‌ ಗುಡ್‌ ನ್ಯೂಸ್‌: ಕೃಷಿ ಯಂತ್ರೋಪಕರಣಗಳ ಮೇಲೆ ಭರ್ಜರಿ ಸಬ್ಸಿಡಿ, ಅರ್ಧಕ್ಕರ್ಧ ಹಣ ಉಳಿತಾಯ

Leave A Reply