ಸರ್ಕಾರದಿಂದ ಮತ್ತೊಂದು ಪ್ರೋತ್ಸಾಹಧನ: ಬಿ.ಎಡ್ ಮತ್ತು ಡಿ.ಎಡ್ ಓದುತ್ತಿರುವ ವಿದ್ಯಾರ್ಥಿಗಳಿಗೆ ₹25,000 ವಿದ್ಯಾರ್ಥಿವೇತನ ಬಿಡುಗಡೆ
ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ ಬಿ.ಎಡ್ ಮತ್ತು ಡಿ.ಎಡ್ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಬಿ.ಎಡ್ ಮತ್ತು ಡಿ.ಎಡ್ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಈ ಒಂದು ಅನುದಾನದಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ. ಏನೆಲ್ಲಾ ಅರ್ಹತೆಗಳಿರಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ನೀಡಲಾಗಿದೆ. ಕೊನೆಯವರೆಗೂ ಓದಿ.

2023-24 ನೇ ಸಾಲಿನಲ್ಲಿ B.ed ಹಾಗೂ D.ed ನಲ್ಲಿ ವ್ಯಾಸಂಗ ಮಾಡುತ್ತಿರುವಂತಹ ಅಲ್ಪಸಂಖ್ಯಾತ ಸಮುದಾಯಗಳಿಗೆ ವಿಶೇಷ ಪ್ರೋತ್ಸಾಹಧನ ನೀಡುವ ಸಲುವಾಗಿ 25 ಸಾವಿರ ರೂಪಾಯಿಯನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿರುವಂತಹ ಬಿ.ಎಡ್ & ಡಿ.ಎಡ್ ಓದುತ್ತಿರುವವರ ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹೊಸ ಕ್ರಮವನ್ನು ಜಾರಿಗೊಳಿಸಲಾಗಿದೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತಹ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ.
ಇದನ್ನು ಸಹ ಓದಿ: ಗೂಗಲ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಡಿಸೆಂಬರ್‌ನಿಂದ ಗೂಗಲ್ ಅಕೌಂಟ್‌ಗಳು ರದ್ದು: ನಿಮ್ಮ ಖಾತೆಯನ್ನು ಸುರಕ್ಷಿತಗೊಳಿಸಲು ಹೀಗೆ ಮಾಡಿ..!
ಸರ್ಕಾರದ ಆದೇಶಕ್ಕೆ ಸಂಬಂಧಪಟ್ಟಂತೆ ಇದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶನಾಲಯ ಕಚೇರಿಯು ಹೊರಡಿಸಿರುವ ಮಾಹಿತಿಯಾಗಿದೆ. ಈ ಪ್ರಕಟಣೆಯ ಅನುಸಾರ ಯಾರೆಲ್ಲ ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದ ವ್ಯಾಪ್ತಿಯಲ್ಲಿ NCT ಯ ಅನುದಾನದ ಅಡಿಯಲ್ಲಿ ಬಿ.ಎಡ್ ಹಾಗೂ ಡಿ.ಎಡ್ ಓದುತ್ತಿದ್ದರೆ ಅಂತಹವರಿಗೆ ಸಹಾಯವಾಗಲೆಂದು ಹಾಗೂ ಭೋದನ ಹಾಗೂ ಕಲಿಕಾ ಸಾಮಾಗ್ರಿಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಿದೆ. ಈ ಒಂದು ವಿದ್ಯಾರ್ಥಿವೇತನಕ್ಕೆ ಅರ್ಜಿಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿಯೊಬ್ಬ ಅಲ್ಪ ಸಮುದಾಯದ ವಿದ್ಯಾರ್ಥಿಗಳಿಗೆ ಅಂದರೆ ಜೈನ, ಬೌದ್ದ, ಪಾರ್ಸಿ, ಸಿಖ್ ಹಾಗೂ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಬಿ.ಎಡ್ ಹಾಗೂ ಡಿ.ಎಡ್ ಓದುತ್ತಿದ್ದರೆ ಅವರಿಗೆ ಕೊಡುವಂತಹ ವಿದ್ಯಾರ್ಥಿವೇತನ ಇದಾಗಿದೆ. ಒಂದು ವರ್ಷಕ್ಕೆ 25 ಸಾವಿರ ರೂಪಾಯಿ ಸಿಗುತ್ತದೆ. ಗರಿಷ್ಟ 2 ವರ್ಷ ಈ ಅನುದಾನವನ್ನು ಕೊಡಲಾಗುತ್ತದೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಪೋಷಕರ ಆದಾಯವು 6 ಲಕ್ಷಕ್ಕಿಂತ ಕಡಿಮೆ ಇರಬೇಕು. ಮೆರಿಟ್ ಅಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ. ಆ ವರ್ಷಕ್ಕೆ ಲಭ್ಯವಿರುವ ಅನುದಾನಕ್ಕನುಗುಣವಾಗಿ ಪ್ರೋತ್ಸಾಹಧನವನ್ನು ಕೊಡಲಾಗುತ್ತದೆ. ಇದಕ್ಕೆ ಸಂಬಂಧಟ್ಟಂತೆ ಡಿಎಡ್ ಗೆ 25% ಇರುತ್ತದೆ ಹಾಗೂ ಬಿ.ಎಡ್ ಗೆ 75% ಇರುತ್ತದೆ. ಶೇಕಡಾ 50 ರಷ್ಟು ಅಂಕಗಳನ್ನು ಪಡೆದುಕೊಳ್ಳಬೇಕು. ಅಂತಹ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕೊಡಲಾಗುತ್ತಿದೆ.
ಈಗಾಗಲೇ ಸೌಲಭ್ಯವನ್ನು ಪಡೆಯುತ್ತಿದ್ದರೆ ಆ ವಿದ್ಯಾರ್ಥಿವೇತನದ ಜೊತೆಗೆ ಈ ಬಿ.ಎಡ್ ಹಾಗೂ ಡಿ.ಎಡ್ ವಿದ್ಯಾರ್ಥಿವೇತನವನ್ನು ಪಡೆಯಲು ಅವಕಾಶ ಇರುತ್ತದೆ. ಬರೋಬ್ಬರಿ 1 ತಿಂಗಳುಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಅರ್ಹ ವಿದ್ಯಾರ್ಥಿಗಳಿಗೆ ಡಿ.ಬಿ.ಟಿ ಮೂಲಕ ಅವರ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಜಮಾವಾಗುತ್ತದೆ. ಎಲ್ಲಾ ಅರ್ಜಿಗಳನ್ನು ಸೇವಾಸಿಂಧು ಪೋರ್ಟಲರ್ ಮುಖಾಂತರ ಹಾಕಬೇಕು.
ಇತರೆ ವಿಷಯಗಳು:
ಆಗಸ್ಟ್ ತಿಂಗಳಿನ ಅಕ್ಕಿ ಹಣ ಬಿಡುಗಡೆ ಆಗಿದೆ: BPL ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಇದ್ದವರು ತಪ್ಪದೆ ನೋಡಿ