ಐಪಿಎಲ್ ಇತಿಹಾಸದಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ ಆಟಗಾರರು ಇವರೇ ನೋಡಿ, ಇವರಲ್ಲಿ ಯಾರು ಟಾಪ್ ಗೊತ್ತಾ?
ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಈ ಸೀಸನ್ ನ ಐಪಿಎಲ್ ಭರ್ಜರಿಯಾಗಿ ನಡೆಯುತ್ತಿದೆ, ಕಳೆದ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದಿತ್ತು, ಪಂದ್ಯವನ್ನು ಕೊನೆಯ ಬಾಲ್‌ವರೆಗೂ ತಂದು ಕ್ಯಾಮರಾನ್ ಗ್ರೀನ್ ಮತ್ತು ಟಿಮ್ ಡೇವಿಡ್ ಅವರ ನೆರವಿನಿಂದ ರೋಚಕ ಗೆಲುವನ್ನು ಪಡೆದರು. ಈ ಸೀಸನ್‌ನ ಮೊದಲ ಗೆಲುವಿನಿಂದ ಮುಂಬೈ ತಂಡದಲ್ಲಿ ಗೆಲುವಿನ ಸಂಭ್ರಮ ಜೋರಾಗಿತ್ತು.

ಪ್ರತಿ ಸೀಸನ್‌ಗಳಲ್ಲಿಯೂ ಕೆಲವು ಆಟಗಾರರು ಅತ್ಯುತ್ತಮವಾದ ಪ್ರದರ್ಶನದಿಂದ ಸದ್ದು ಮಾಡುತ್ತಾರೆ, ಬೌಲರ್‌ಗಳು ಕಡಿಮೆ ರನ್ಸ್ ನೀಡಿ ಹೆಚ್ಚು ವಿಕೆಟ್‌ಗಳನ್ನು ಪಡೆದು ಸದ್ದು ಮಾಡಿದರೆ ಬ್ಯಾಟ್ಸ್‌ಮನ್‌ಗಳು ಕಡಿಮೆ ಬಾಲ್‌ಗಳಿಂದ ಹೆಚ್ಚು ರನ್ ಸ್ಕೋರ್ ಮಾಡಿ ದಾಖಲೆಗಳನ್ನು ಬರೆಯುತ್ತಾರೆ. ಈ ಲೇಖನದಲ್ಲಿ ಅತ್ಯಂತ ಕಡಿಮೆ ಬಾಲ್‌ಗಳಲ್ಲಿ ವೇಗವಾಗಿ ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಬಗ್ಗೆ ತಿಳಿಯೋಣ, ಹಾಗಾಗಿ ಈ ಲೇಖನವನ್ನು ಕೊನೆಯವರೆಗೂ ಓದಿರಿ.
2018 ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ ಕೆಎಲ್ ರಾಹುಲ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 14 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರು. ಇದು ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ. ಈ ಇನ್ನಿಂಗ್ಸ್‌ನಲ್ಲಿ ರಾಹುಲ್, ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದ್ದರು.
Viral Videos | Click Here |
Sports News | Click Here |
Movie | Click Here |
Tech | Click here |
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಪ್ಯಾಟ್ ಕಮ್ಮಿನ್ಸ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.
2014ರಲ್ಲಿ ಕೆಕೆಆರ್ ತಂಡವನ್ನು ಪ್ರತಿನಿಧಿಸಿದ್ದ ಯೂಸುಫ್ ಪಠಾಣ್ ಹೈದರಾಬಾದ್ ತಂಡದ ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಪಠಾಣ್ 22 ಎಸೆತಗಳಲ್ಲಿ 5 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 72 ರನ್ ಗಳಿಸಿದರು.
ಪ್ರಮುಖ ಲಿಂಕ್‌ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಸುನಿಲ್ ನರೈನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಪಂದ್ಯದಲ್ಲಿ ನರೈನ್ 17 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ನೆರವಿನಿಂದ 54 ರನ್ ಗಳಿಸಿದ್ದರು.
2023 ರ ಸೀಸನ್‌ನಲ್ಲಿ RCB ವಿರುದ್ಧ ನಿಕೋಲಸ್ ಪೂರನ್ ಆಕಾಶವೇ ಮಿತಿ ಎಂಬಂತೆ ಆಡಿದ್ದಾರೆ. ಅವರು ಕೇವಲ 15 ಎಸೆತಗಳಲ್ಲಿ 50 ರನ್ ಗಳಿಸಿದರು ಮತ್ತು ಈ ಸೀಸನ್‌ನಲ್ಲಿ ವೇಗವಾಗಿ 50 ರನ್ ಗಳಿಸಿದ ಆಟಗಾರರಾಗಿದ್ದಾರೆ.
ಇತರೆ ಮಾಹಿತಿಗಾಗಿ | Click Here |