Vidyamana Kannada News

ಬಜೆಟ್‌ ನಿಂದ ರೈತರಿಗೆ ಗುಡ್‌ ನ್ಯೂಸ್!‌ ಶೂನ್ಯ ಬಡ್ಡಿ ದರದಲ್ಲಿ ಸಿಗಲಿದೆ 5 ಲಕ್ಷದವರೆಗೆ ಸಾಲ, ರೈತರಿಗೆ ನೆರವಾದ ಕಾಂಗ್ರೆಸ್‌ ಸರ್ಕಾರ

0

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ನಿಮಗೆಲ್ಲರಿಗೂ ರಾಜ್ಯ ಬಜೆಟ್‌ ಮಂಡನೆಯಲ್ಲಿ ತಿಳಿಸಿದ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರದಂದು 3.27 ಲಕ್ಷ ಕೋಟಿ ರೂಪಾಯಿ ಮೌಲ್ಯದ ಈ ಹಣಕಾಸು ವರ್ಷದ ಎರಡನೇ ರಾಜ್ಯ ಬಜೆಟ್ ಅನ್ನು ಮಂಡಿಸಿದ್ದಾರೆ. ಇದರಲ್ಲಿ ಯಾವ ಯಾವ ಕ್ಷೇತ್ರಕ್ಕೆ ಎಷ್ಟು ಹಣವನ್ನು ನೀಡಿದ್ದಾರೆ ಎಂಬುವುದನ್ನು ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

Good News for Farmers from The Budget

ಕೃಷಿ, ಹೈನುಗಾರಿಗೆ, ಪಶು ಸಂಗೋಪನೆ, ವೀನುಗಾರಿಗೆ, ಆಹಾರ ಶಿಕ್ಷಣ, ಆರೋಗ್ಯ ಮಹಿಳಾ ಕಲ್ಯಾಣ, ಗ್ರಾಮೀಣಾಭಿವೃದ್ದಿ ವಲಯಗಳಿಗೆ ಬಜೆಟ್‌ ನಿಂದ ಏನು ಸಿಕ್ಕಿದೆ ಎಂದು ಹೇಳುವುದಾದರೆ ರಾಜ್ಯದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಚದವರೆಗೆ ಸಾಲವನ್ನು ನೀಡುತ್ತಾರೆ. ಮೊದಲ ಅನುಗ್ರಹ ಯೋಜನೆ ಮರು ಜಾರಿಗೆ ಘೋಷಣೆ ಇದರಲ್ಲಿ ಪ್ರಾಣಿಗಳ ಅಂದರೆ ಕುರಿ ಮತ್ತು ಮೇಕೆಗಳ ಸಾವಿಗೆ 5000 ಹಾಗೂ ಜಾನುವಾರಗಳ ಸಾವಿಗೆ 10 ಸಾವಿರವನ್ನು ನೀಡಲಾಗುತ್ತದೆ. 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಪೌಷ್ಠಿಕ ವಿಸ್ತರಣೆಗಾಗಿ ಹಾಲು, ಮೊಟ್ಟೆ, ಬಾಳೆಹಣ್ಣು ನೀಡಲಾಗುತ್ತದೆ. ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ 5 ಸಾವಿರ ಕೋಟಿ ವೆಚ್ಚದ ಕಾಮಗಾರಿ, ಉದ್ಯಮ ಶಕ್ತಿ ಯೋಜನೆಗೆ 100 ಕಡೆ ಪೆಟ್ರೋಲ್‌ ಬಂಕ್‌, ಮಹಿಳಾ ಸಂಘಗಳ ಮೂಲಕ ಈ ಬಂಕ್ ಗಳನ್ನು ನಿರ್ವಹಣೆ ಮಾಡಲಾಗುತ್ತದೆ. ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು 5 ಕೊಟಿಯವರೆಗೆ ಸಾಲ 4% ಬಡ್ಡಿ ದರದಲ್ಲಿ ನೀಡಲಾಗುತ್ತದೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿವೇತನ ಯೋಜನೆ ಮರಿ ಜಾರಿ, ಹೊಸದಾಗಿ 10 ಅಲ್ಪಸಂಖ್ಯಾತ ಮೂರಾರ್ಜಿ ಶಾಲೆಗಳ ಸ್ಥಾಪನೆ. ಬೆಂಗಳೂರಿನ ಹಜ್‌ ಭವನದಲ್ಲಿ 10 ತಿಂಗಳ ವಸತಿ ಸಹಿತ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, 10 ಸಾವಿರ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕ್‌ ಸಾಲ ಜೊತೆಗೆ 1 ಲಕ್ಷದವರೆಗೆ ಸಹಾಯಧನ.

ಇದನ್ನೂ ಓದಿ: ಬಜೆಟ್‌ ನಲ್ಲಿ ಸಿಕ್ತು ವಿದ್ಯಾರ್ಥಿಗಳಿಗೆ ಬಂಪರ್‌ ಸುದ್ದಿ: ಅರಿವು ಯೋಜನೆ, ವಿದ್ಯಾಸಿರಿಗೆ ಸಿಕ್ತು ಮರುಚಾಲನೆ; ಎಂದಿನಿಂದ ಜಾರಿ?

ಜಿಲ್ಲೆಗಳಿಗೆ ಸಿದ್ದರಾಮಯ್ಯ ಬಜೆಟ್‌ ನಲ್ಲಿ ಸಿಕ್ಕಿದ್ದೇನು?

 • ಡಿಕೆ ಶಿವಕುಮಾರ್‌ ಅವರ ಕನಕಪುರಕ್ಕೆ ಮೆಡಿಕಲ್‌ ಕಾಲೇಜ್‌ನ ಮರುಸ್ಥಾಪನೆ,
 • ವಿಜಯಪುರಕ್ಕೆ ವಿಮಾನ ನಿಲ್ದಾಣ
 • ಕಲಬುರುಗಿಯಲ್ಲಿ 20 ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆ
 • ಶಿಡ್ಲಘಟ್ಟದಲ್ಲಿ ಹೈಟೆಕ್‌ ರೇಷ್ಮೆ ಗೂಡು ಕೇಂದ್ರ
 • ಕೋಲಾರದಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರ
 • ಬಿಡದಿ ರಾಮನಗರದಲ್ಲಿ ಮಹಿಳಾ ಡ್ರೈವಿಂಗ್‌ ಶಾಲೆ
 • ಮೈಸೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಫಿಲ್ಮ್‌ ಸಿಟಿ
 • ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ದಿಗೆ ಚಾಮುಂಡಿ ಅಭಿವೃದ್ದಿ ಪಾಧಿಕಾರ
 • ಪುನೀತ್‌ ಸ್ಮರಣಾರ್ಥ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಎಇಡಿ ಸೆಂಟರ್‌

ಹಿಂದಿನ ಸರ್ಕಾರದಿಂದ ಕೈ ಬಿಡುವ ಯೋಜನೆಗಳು

 • ಜಿಲ್ಲೆಗೊಂದು ಗೋಶಾಲೆ ರದ್ದು
 • ಎನ್ಇಪಿ ರದ್ದು
 • ಎಪಿಎಂಸಿ ಕಾಯ್ದೆ ರದ್ದು
 • ವಿವಾದಿತ ಶಾಲಾ ಪಠ್ಯ ವಾಪಸ್‌
 • ಭಾಗ್ಯಲಕ್ಷ್ಮಿ ಯೋಜನೆಗೆ ಕೊಕ್‌
 • ಅಗ್ನಿವೀರ್‌ ತರಬೇತಿ ಕೇಂದ್ರ ( ಪ್ರಸ್ತಾಪವಿಲ್ಲ)
 • ಗೋಹತ್ಯೆ ನಿಷೇಧ ಕಾಯ್ದೆ
 • ಮಂತಾತರ ವಿರೋಧಿ ಕಾನೂನು ರದ್ದು

ಪ್ರಮುಖ ಲಿಂಕ್ ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಕರ್ನಾಟಕದ ಒಟ್ಟು ಬಜೆಟ್ ವೆಚ್ಚ 3,27,747 ಕೋಟಿ ರೂ. ಮತ್ತು ಆದಾಯ ವೆಚ್ಚ 2,50,933 ಕೋಟಿ ರೂ. ಬಜೆಟ್‌ನ ಬಂಡವಾಳ ವೆಚ್ಚ 54,374 ಕೋಟಿ ರೂ. ಮತ್ತು ಸಾಲ ಮರುಪಾವತಿ 22,441 ಕೋಟಿ ಎಂದು ಎಎನ್‌ಐ ವರದಿ ಮಾಡಿದೆ. 2022-23ರಲ್ಲಿ ಒಟ್ಟು ರಾಜ್ಯ ದೇಶೀಯ ಉತ್ಪನ್ನ (ಜಿಎಸ್‌ಡಿಪಿ) ಶೇಕಡಾ 7.9 ರಷ್ಟು ಹೆಚ್ಚಾಗಿದೆ ಎಂದು ಹೇಳಿದರು. ರೈತ ಉತ್ಪಾದಕ ಸಂಸ್ಥೆಗಳನ್ನು ಬಲಪಡಿಸಲು ಹಿಂದುಳಿದ ತಾಲೂಕುಗಳಲ್ಲಿ 100 ಎಫ್‌ಪಿಒಗಳಿಗೆ ಆರ್ಥಿಕ ನೆರವು ನೀಡಲಾಗುವುದು, ಕೃಷಿ ಆಧಾರಿತ ಸ್ಟಾರ್ಟ್‌ಅಪ್‌ಗಳು ಮತ್ತು ಮೈಕ್ರೋ ಫುಡ್ ಪ್ರೊಸೆಸಿಂಗ್ ಉದ್ಯಮಿಗಳನ್ನು ಬೆಂಬಲಿಸಲು 5 ಕೋಟಿ ರೂ.ಗಳನ್ನು ನೀಡಲಾಗುವುದು ಮತ್ತು 300 ಹೊಸ ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.

ಜಲ ಸಂಪನ್ಮೂಲಗಳು

ಜಲಸಂಪನ್ಮೂಲದ ಮೇಲೆ ಕೇಂದ್ರೀಕರಿಸಿದ ಸರ್ಕಾರವು ಅಸ್ತಿತ್ವದಲ್ಲಿರುವ ಯೋಜನೆಗಳ ಜೊತೆಗೆ 940 ರೂ ವೆಚ್ಚದಲ್ಲಿ 10 ಹೊಸ ನೀರಾವರಿ ಯೋಜನೆಗಳನ್ನು ಪರಿಚಯಿಸಿದೆ. ಜಲಸಂಪನ್ಮೂಲ ಇಲಾಖೆಗೆ ಬಜೆಟ್ ನಲ್ಲಿ 20 ಸಾವಿರ ಕೋಟಿ ರೂ. ಮಂಜೂರಾದ ಕಾಮಗಾರಿಗಳ ಅಂದಾಜು ವೆಚ್ಚವು ಹಂಚಿಕೆಗಿಂತ ಐದು ಪಟ್ಟು ಹೆಚ್ಚು ಎಂದು ಕರ್ನಾಟಕದ ಸಿಎಂ ಹೇಳಿದರು. ಏಪ್ರಿಲ್ 1 ರವರೆಗೆ ಜಲಸಂಪನ್ಮೂಲ ಇಲಾಖೆಯಲ್ಲಿ ಅನುಮೋದಿತ ಯೋಜನೆಗಳಿಗೆ ಒಂದು ಲಕ್ಷ ಕೋಟಿ ರೂಪಾಯಿಗಳ ಅಗತ್ಯವಿದೆ ಮತ್ತು ಕಳೆದ 6 ತಿಂಗಳಲ್ಲಿ 25,548 ಕೋಟಿ ರೂಪಾಯಿಗಳ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ಇತರೆ ವಿಷಯಗಳು

ಕರ್ನಾಟಕ ಬಜೆಟ್ ಗುಡ್‌ ನ್ಯೂಸ್: ಇ-ಕಾಮರ್ಸ್ ವಿತರಣಾ ಉದ್ಯೋಗಿಗಳಿಗೆ ಸಿಗಲಿದೆ ₹ 4 ಲಕ್ಷ, ಬಜೆಟ್‌ನಿಂದ ಸಿಕ್ತು ಬಂಪರ್‌ ಲಾಟ್ರಿ

ಬೆಂಗಳೂರಿಗೆ ಬಜೆಟ್‌ ಜಾಕ್‌ಪಾಟ್: ಬರೋಬ್ಬರಿ 45 ಸಾವಿರ ಕೋಟಿ ಮೀಸಲು, ಸ್ಮಾರ್ಟ್ ಸಿಟಿ ಆಗಲಿದೆ ಇನ್ನು ಸ್ಮಾರ್ಟ್

Leave A Reply