Vidyamana Kannada News

ಅಬ್ಬರಿಸಿ ಬೊಬ್ಬಿರಿಯುತ್ತಿರುವ ವರುಣ! ವರ್ಷಧಾರೆಗೆ ಜನ ಜೀವನ ಅಸ್ತವ್ಯಸ್ತ, ಈ ಜಿಲ್ಲೆಗಳಿಗೆ 5 ದಿನ ರೆಡ್‌ ಅಲರ್ಟ್‌ ಘೋಷಣೆ

0

ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಮುಂಗಾರು ಮಳೆಯ ಇಂದಿನ ಸ್ಥಿತಿಗತಿಗಳನ್ನು ತಿಳಿಸಿಕೊಡಲಾಗಿದೆ. ಹಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಪರದಾಡುವಂತಾಗಿದೆ, ಇನ್ನು ಎಷ್ಟು ದಿನ ಈ ವಿಪರೀತ ಮಳೆ, ಯಾವ ಜಿಲ್ಲೆಗಳಿಗೆ ಆಪತ್ತು ಕಾದಿದೆ? ಎಂಬ ಎಲ್ಲ ವಿಷಯದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ, ಹಾಗಾಗಿ ನಮ್ಮ ಈ ಲೇಖನವನ್ನು ಕೊನೆಯವರೆಗು ಓದಿ.

heavy rain effects

ರಾಜ್ಯದಲ್ಲಿ ಮುಂಗಾರು ಮಳೆ ಚುರುಕನ್ನು ಪಡೆದುಕೊಂಡಿದೆ. ಒಂದು ತಿಂಗಳು ಲೇಟಾಗಿ ಬಂದರು ಕೂಡ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಲವು ಅವಾಂತರಗಳನ್ನು ಸೃಷ್ಟಿ ಮಾಡುತ್ತಿದೆ. ರಾಜ್ಯದ ಕರಾವಳಿ ಮಲೆನಾಡಿನಲ್ಲಿ ಭಾರಿ ವರ್ಷಧಾರೆಯಾಗುತ್ತಿದೆ. ಮಳೆಗೆ 4 ಜನ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಂಗಳೂರು, ಶಿವಮೊಗ್ಗ, ಮಡಿಕೇರಿಯಲ್ಲಿ ರಣಮಳೆಯಾಗುತ್ತಿದೆ. ಮಂಗಳೂರಿನಲ್ಲಿ ಗುಡ್ಡ ಕುಸಿತವಾಗಿದ್ದು ಹಳೆಯ ಕಟ್ಟಡ ಒಂದು ಅಪಾಯಕ್ಕೆ ಸಿಲುಕಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ. ದೇವಸ್ಥಾನಗಳಿಗೆ ನೀರು ನುಗ್ಗಿ ಅವಾಂತರಗಳನ್ನು ಸೃಷ್ಟಿ ಮಾಡಿದೆ.

ಇದನ್ನೂ ಓದಿ: ಅಂತಿಮ ಘಟ್ಟ ತಲುಪಿದ ಗೃಹಲಕ್ಷ್ಮಿ ಯೋಜನೆ! ಅದ್ದೂರಿ ಚಾಲನೆಗೆ ಸರ್ಕಾರದಿಂದ ಹೊಸ ಪ್ಲಾನಿಂಗ್, ಪೂರ್ಣ ಪ್ರಮಾಣದಲ್ಲಿ ಜಾರಿಯಾಗುತ್ತ?

ಕೊಡಗಿನಲ್ಲು ಸಹ ಮಳೆಯ ಅಬ್ಬರ ಮುಂದುವರೆದಿದೆ, ಭಾಗಮಂಡಲ ತಲಕಾವೇರಿ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಳವಾಗಿದೆ. ಕಾಫಿನಾಡು, ಚಿಕ್ಕಮಂಗಳೂರಿನಲ್ಲಿ ಮಳೆ ಗಾಳಿಗೆ ಮರ ವಿದ್ಯುತ್‌ ಕಂಬಗಳು ನೆಲಕ್ಕುರುಳುತ್ತಿವೆ, ಶಿವಮೊಗ್ಗದಲ್ಲಿ ಭಾರಿ ಮಳೆಯ ಕಾರಣ ತುಂಗಾ ಡ್ಯಾಮ್‌ ಬರ್ತಿಯಾಗಿದೆ. ಗೇಟ್ಗಳನ್ನು ತೆರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ ಇದೆಲ್ಲವು ಸಹ ಮುಂಗಾರು ಮಳೆ ಸೃಷ್ಟಿಸಿರುವ ಅವಾಂತರ, ಜೂನ್‌ನ ಆರಂಭದಲ್ಲೆ ಮುಂಗಾರು ಮಳೆ ರಾಜ್ಯವನ್ನು ಪ್ರವೇಶ ಮಾಡಿತ್ತು

ಆದರೆ ಬಿಪರ್ಜೋಯ್‌ ಎಫೆಕ್ಟ್‌ನಿಂದ ತೀವ್ರ ಗಾಳಿಯಿದ್ದ ಪರಿಣಾಮ ಮಳೆಯ ಅಬ್ಬರ ಅಷ್ಟಾಗಿ ಕಾಣಿಸಿಕೊಂಡಿಲ್ಲ ಇನ್ನೇನು ಬರದ ಆತಂಕ ರಾಜ್ಯದಲ್ಲಿ ಮನೆ ಮಾಡೆಬಿಡ್ತು ಅನ್ನುವಾಗ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮಳೆ ಹೆಚ್ಚಾದ ಸಂದರ್ಭದಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗುತ್ತವೆ. ಅದೇ ರೀತಿ ಅವಾಂತರಗಳು ಈಗ ಸೃಷ್ಟಿಯಾಗಿರುವಂತಹದ್ದು, ಉಡುಪಿಯಲ್ಲಿ ದೇವರಿಗೆ ಜಲದಿಗ್ಬಂದನ ಆಗಿದೆ.

ಪ್ರಮುಖ ಲಿಂಕ್‌ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಎಲ್ಲ ಜೀವನಧಿಗಳು ಕೂಡ ತುಂಬಿ ಹರಿಯುತ್ತಿವೆ. ಚಿಕ್ಕಮಂಗಳೂ, ಹಾಸನ, ಕೊಡಗು ಮುಂತಾದ ಕಡೆ ಗುಡ್ಡಗಳು ಕುಸಿದಿದೆ. ಕಾರಾವಾರ ದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮನೆಯೊಳಗಡೆ ನೀರು ಬರುತ್ತಿದೆ, ತೋಟಗಳು ಕೂಡ ಸಂಪೂರ್ಣವಾಗಿ ನೀರು ತುಂಬಿದೆ.

ಇತರೆ ವಿಷಯಗಳು

ಅನ್ನಭಾಗ್ಯ ಯೋಜನೆಯ ಹೊಸ ವರಸೆ! ಆರ್ಥಿಕ ಹೊರೆ ತಪ್ಪಿಸಲು ಅಧಿಕಾರಿಗಳ ಸಲಹೆ, ಅಕ್ಕಿ ಪಡೆಯದಿದ್ದರೆ ಹಣ ಸಿಗಲ್ಲ..!

ಪಡಿತರ ಚೀಟಿದಾರರಿಗೆ ಹೊಸ ಬದಲಾವಣೆ! ಇವರಿಗೆ ಮಾತ್ರ ಸಿಗಲಿದೆ ಉಚಿತ ರೇಷನ್‌, ಹೊಸ ನಿಯಮ ಜಾರಿ

Leave A Reply