ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಜನರನ್ನು ಕರೆತರಲು 1600 ಬಸ್‌ಗಳಿಗೆ ಖರ್ಚಾಗಿದ್ದು ಎಷ್ಟು ಕೋಟಿ ಗೊತ್ತಾ? ಈ ಬಾಡಿಗೆಯನ್ನು ಪಾವತಿಸಿದ್ದು ಯಾರು?
ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಕಳೆದ 2ತಿಂಗಳ ಹಿಂದೆ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣ ಉದ್ಘಾಟನೆಯಾಗಿತ್ತು. ಉದ್ಘಾಟನೆಗೆ ರಾಷ್ಟ್ರದ ಪ್ರಧಾನಿಯಾದ ನರೇಂದ್ರ ಮೋದಿಯವರು ಆಗಮಿಸಿದ್ದರು. ವಿಮಾನ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಆಗಮಿಸಿದ್ದರು. ಜನರಿಗಾಗಿ ಸಾವಿರಾರು ಬಸ್‌ಗಳನ್ನು ಸಹ ಅನೇಕ ಊರುಗಳಿಗೆ ಬಿಡಲಾಗಿತ್ತು. ಆದರೆ ಜನರನ್ನು ಕರೆತರಲು ಬಂದಂತಹ ಬಸ್‌ಗಳಿಗೆ ಬಾಡಿಗೆ ಎಷ್ಟಾಗಿತ್ತು, ಈ ಬಾಡುಗೆಯನ್ನು ಕಟ್ಟಿದವರಾರು ಎಂದು ಎಂದಾದರೂ ಯೋಚಿಸಿದ್ದೀರಾ? ಹಾಗಾದರೆ ಈ ಲೇಖನವನ್ನು ಕೊನೆಯವರೆಗೂ ಓದಿ.

ಶಿವಮೊಗ್ಗದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣ ಉದ್ಘಾಟನೆಗಾಗಿ ಸುಮಾರು 1,600 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಅನೇಕ ಊರುಗಳಿಂದ ಜನರನ್ನು ಕರೆತರುವುದಕ್ಕಾಗಿ ಸುಮಾರು ₹3.94 ಕೋಟಿ ಖರ್ಚು ಮಾಡಲಾಗಿದೆಯಂತೆ. ನಾಗರಿಕರೊಬ್ಬರು ಸಲ್ಲಿಸಿದ RTI ಮೂಲಕ ಈ ಮಾಹಿತಿ ಸಿಕ್ಕಿದೆ. ಈ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಬಾಡಿಗೆಗಾಗಿ ಪಡೆದಂತಹ ಹಣವನ್ನು ಶಿವಮೊಗ್ಗ ಜಿಲ್ಲೆಯ ‘ಕಾರ್ಯನಿರ್ವಾಹಕ ಎಂಜಿನಿಯರ್‘ ಪಾವತಿಸಿ ಮಾಡಿದ್ದಾರೆ ಎಂದು RTI ಉತ್ತರದಲ್ಲಿ ತಿಳಿಸಲಾಗಿದೆ.
ಸೋಗಾನೆಯಲ್ಲಿರುವ ಕಮಲದ ಆಕಾರದಲ್ಲಿ ಮೂಡಿಬಂದ ವಿಮಾನ ನಿಲ್ದಾಣವನ್ನು 27 ಫೆಬ್ರವರಿ ಯಂದು ಪ್ರಧಾನಿಗಳಾದ ನರೇಂದ್ರ ಮೋದಿಯವರು ಬಹಳ ಸಂಭ್ರಮದಿಂದ ಉದ್ಘಾಟನೆ ಮಾಡಿದ್ದರು.
RTI ಮೂಲಕ ಮಾಹಿತಿಯನ್ನು ಕೇಳಿರುವ ಆಕಾಶ್ ಪಾಟೀಲ್, KSRTC ಶಿವಮೊಗ್ಗ ವಿಭಾಗದಿಂದ ಬಂದ ಉತ್ತರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Viral Videos | Click Here |
Sports News | Click Here |
Movie | Click Here |
Tech | Click here |
ಉತ್ತರದಲ್ಲಿ ಹೀಗಿದೆ: ”ವಿಮಾನ ನಿಲ್ದಾಣ ಉದ್ಘಾಟನೆಗೆ ಜಿಲ್ಲೆಯ ಅನೇಕ ತಾಲೂಕುಗಳಿಂದ ವಿಮಾನ ನಿಲ್ದಾಣಕ್ಕೆ ಜನರನ್ನು ಕರೆತರಲು ಫೆ.27ರಂದು ನಿಗಮದಿಂದ ಗುತ್ತಿಗೆ ಆಧಾರದಲ್ಲಿ ಸುಮಾರು 1,600 ಬಸ್‌ಗಳನ್ನು ಕಳುಹಿಸಲಾಗಿತ್ತು. ಎಲ್ಲಾ ಬಸ್ಸುಗಳ ಒಟ್ಟು ಬಿಲ್ ₹3,93,92,565 ಆಗಿದ್ದು, ಆ ಬಿಲ್‌ನ್ನು ಶಿವಮೊಗ್ಗದ ಕಾರ್ಯನಿರ್ವಾಹಕ ಎಂಜಿನಿಯರ್ ಪಾವತಿಸಿದ್ದಾರೆ.
ಉದ್ಘಾಟನಾ ಸಮಾರಂಭಕ್ಕೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು ಎಂದು ವರದಿಯಾಗಿದೆ. ಜಿಲ್ಲಾಡಳಿತವು ಪ್ರವಾಸಿಗರಿಗೆ ಊಟ ಮತ್ತು ಸಾರಿಗೆ ಸೌಲಭ್ಯವನ್ನು ಒದಗಿಸಿತ್ತು. ಕಾರ್ಯಕ್ರಮಕ್ಕೆ ಸುಮಾರು 1 ಲಕ್ಷ ಕುರ್ಚಿಗಳನ್ನು ಆರ್ಡರ್ ಮಾಡಲಾಗಿದ್ದು, ಸುಗಮ ಆಹಾರ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮದ ದಿನಕ್ಕೂ ಮೊದಲು ಶಿವಮೊಗ್ಗ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಮುಖ ಲಿಂಕ್‌ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಸೋಗಾನೆ ವಿಮಾನ ನಿಲ್ದಾಣದ ಉದ್ಘಾಟನೆಯನ್ನು ಬಿಜೆಪಿ ಪಕ್ಷದವರು ತಮ್ಮ ಸ್ವಂತ ಕಾರ್ಯಕ್ರಮವನ್ನಾಗಿ ಮಾಡಿದ್ದಾರೆ ಎಂದು ಅನೇಕ ಸ್ಥಳೀಯ ವಿರೋಧ ಪಕ್ಷದ ನಾಯಕರು ಆರೋಪ ಮಾಡಿದ್ದಾರೆ.
KSRTC ಅಧಿಕಾರಿಗಳು ಅಂಕಿಅಂಶಗಳನ್ನು ಖಾತ್ರಿಪಡಿಸಿದ್ದಾರೆ. “ಜನರ ಸೇವೆಗೋಸ್ಕರ ನಿಗಮದಿಂದ ನಾವು ರಾಜಕೀಯ ರ್ಯಾಲಿಗಳು, ಶಾಲಾ ಪ್ರವಾಸಗಳು, ದೇವಸ್ಥಾನಗಳು ಮತ್ತು ಜಾತ್ರೆಗಳು ಹಾಗೂ ಇನ್ನಿತರ ಹಲವು ಉದ್ದೇಶಗಳಿಗೆ ಬಸ್ಸುಗಳನ್ನು ಒಪ್ಪಂದದ ಮೇಲೆ ನೀಡುತ್ತೇವೆ. ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ’ ಎಂದು KSRTC ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬು ಕುಮಾರ್ ಹೇಳಿದರು.
ಇತರೆ ಮಾಹಿತಿಗಾಗಿ | Click Here |
ಆಕಾಶ್ ಪಾಟೀಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಪೋಸ್ಟ್ ಸಾಕಷ್ಟು ಪ್ರತಿಕ್ರಿಯೆಗಳನ್ನು ಕೂಡ ಪಡೆದಿದೆ.
“ಜನಸಾಮಾನ್ಯರ ಹಣದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿ, ಉದ್ಘಾಟನೆಗಾಗಿ ಜನರ ಹಣವನ್ನೇ ಖರ್ಚು ಮಾಡಿ, ನಮ್ಮ ಪಕ್ಷದ ದೊಡ್ಡ ಸಾಧನೆ ಎಂದು ಹೇಳುತ್ತಾರೆ.!” ಎಂದು ಚಂದ್ರಶೇಖರ ಶಾಸ್ತ್ರಿಯವರು ಟ್ವೀಟ್ ಮಾಡಿದ್ದಾರೆ.
“ಇದು ಭೀಕರವಾಗಿದೆ! ನಿಲ್ಲಿಸಬೇಕಾಗಿದೆ! ಉದ್ಘಾಟನೆಗೆ ಜನರನ್ನು ವಿಮಾನ ನಿಲ್ದಾಣಕ್ಕೆ ಕರೆತರಲು ಸರ್ಕಾರ ಏಕೆ ಹಣ ನೀಡಿದೆ? ಎಂದು ಭರತ್ ಎಚ್.ಗೌಡ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಇತರೆ ವಿಷಯಗಳು:
KEA Recruitment 2023: ಪದವಿ ಪಾಸಾದವರಿಗೆ ಉದ್ಯೋಗವಕಾಶ, ಆಸಕ್ತರು ಕೂಡಲೇ ಅಪ್ಲೈ ಮಾಡಿ
ಮತ್ತೆ ಮಾರುಕಟ್ಟೆಗೆ ಎಂಟ್ರಿಕೊಟ್ಟ ಕರಿಜ್ಮಾ, ಬೆಲೆ ಮತ್ತು ಮೈಲೇಜ್ ನೋಡಿದ್ರೆ ಫಿದಾ ಆಗ್ತೀರಾ!