Vidyamana Kannada News

ಸೂರ್ಯನಿಗೆ ಅಷ್ಟು ಬೆಳಕು ಎಲ್ಲಿಂದ ಬರುತ್ತೆ ಗೊತ್ತಾ? ಸೂರ್ಯ ಯಾವಾಗ ಸಾಯುತ್ತಾನೆ, ಇಲ್ಲಿದೆ ಇಂಟ್ರೆಸ್ಟಿಂಗ್‌ ಸ್ಟೋರಿ..!

0

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವಿಗೂ ಕೂಡ ಅನಿರ್ವಾಯವಾಗಿರುವ ಹಾಗೂ ನಮ್ಮ ಸೌರಮಂಡಲದ ಅತ್ಯಂತ ಪ್ರಮುಖ ಭಾಗವಾಗಿರುವ, ಆಧಾರಸ್ತಂಭವಾಗಿರುವ ಸೂರ್ಯನನ್ನು ಅನ್ವೇಷಿಸಲು ಇಸ್ರೋ ಮುಂದಾಗಿದೆ. ಸೂರ್ಯ ಭೂಮಿಯಿಂದ ಎಷ್ಟು ದೂರದಲ್ಲಿದ್ದಾನೆ. ಸೂರ್ಯ ಒಂದೇ ಕಡೆ ಇರುತ್ತಾನಾ ಅಥವಾ ಚಲಿಸುತ್ತಾನ, ಸೂರ್ಯ ಭೂಮಿಯಂತೆ ತಿರುಗುತ್ತಾನಾ ಹಾಗೂ ಸೂರ್ಯನ ವಯಸ್ಸೆಷ್ಟು? ಸೂರ್ಯನ ವಾತಾವರಣ ಹೇಗಿದೆ? ಸೂರ್ಯನಲ್ಲಿ ಶಕ್ತಿ ಉತ್ಪಾದನೆ ಹೇಗೆ ಆಗುತ್ತದೆ. ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ. ಕೊನೆಯವರೆಗೂ ಓದಿ.

solar system

ಎಲ್ಲ ಜೀವಿಗಳ ಶಕ್ತಿಯ ಮೂಲ ಕೇಂದ್ರ ಬಿಂದುವಾಗಿರುವ ಸೂರ್ಯ ಒಂದು ನಕ್ಷತ್ರವಾಗಿದೆ. ಸೂರ್ಯನ ಸುತ್ತ ಭೂಮಿ ಸೇರಿದಂತೆ 8 ಗ್ರಹಗಳು, ಕ್ಷುದ್ರ ಗ್ರಹಗಳು, ಉಪಗ್ರಹಗಳು ಧೂಮಕೇತುಗಳು ಸುತ್ತುತ್ತವೆ. ಭೂಮಿಗೆ ಅತ್ಯಂತ ಹತ್ತಿರವಿರುವ ನಕ್ಷತ್ರ ಸೂರ್ಯ. ವೈಜ್ಞಾನಿಕವಾಗಿ ಎಷ್ಟು ಪ್ರಮುಖನೋ ಹಾಗೆ ಧಾಮಿರ್ಕವಾಗಿಯೂ ಹಿಂದೂಗಳ ಪಾಲಿಗೆ ದೇವತೆಯಾಗಿದ್ದಾನೆ. ಇತಿಹಾಸದುದ್ದಕ್ಕೂ ಸೂರ್ಯನನ್ನು ಹಿಂದೂಗಳು ಶಕ್ತಿ ದೇವತೆ ಎಂದು ನಂಬಿದ್ದಾರೆ. ಭೂಮಿಯ ಮೇಲೆ ವಾಸಿಸಲು ಯೋಗ್ಯ ಬೆಳಕು ಹಾಗೂ ಶಕ್ತಿಯನ್ನು ನೀಡುವ ಸೂರ್ಯನ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಯೋಣ.

ದ್ಯುತಿ ಸಂಶ್ಲೇಷಣೆ ಕ್ರಿಯೆಯಲ್ಲಿ ಸೂರ್ಯನ ಮಹತ್ವ ದೊಡ್ಡದಾಗಿದೆ. ಇಷ್ಟೆಲ್ಲಾ ಪ್ರಮುಖವಾಗಿರುವ ಸೂರ್ಯ ಸುಮಾರು 460 ಕೋಟಿ ವರ್ಷಗಳ ಹಿಂದೆ ಹುಟ್ಟಿರುವ ಸೂರ್ಯ ಬೆಂಕಿ ಉಂಡೆಯಂತೆ ಕಾಣುವ ಆದಿತ್ಯ ಭೂಮಿಯಿಂದ 6.95 ಲಕ್ಷ ಕಿಲೋಮೀಟರ್ ರೇಡಿಯಸ್‌ ಅನ್ನು ಹೊಂದಿದ್ದಾನೆ. ಭೂಮಿಗಿಂತ ಗಾತ್ರದಲ್ಲಿ 109 ಪಟ್ಟು ಹೆಚ್ಚು ದೊಡ್ಡದಾಗಿದೆ. ಭೂಮಿಗಿಂತ 3.3 ಲಕ್ಷಗಳಷ್ಟು ತೂಕವನ್ನು ಹೊಂದಿದ್ದಾನೆ. ಈ ಮೂಲಕ ನಮ್ಮ ಸೌರಮಂಡಲದ 99.86% ತೂಕ ಕೇವಲ ಸೂರ್ಯನಿಂದ ಬಂದಿದೆ.

ಇದನ್ನು ಸಹ ಓದಿ: ಬಿಸಿ ಬಿಸಿ ಸುದ್ದಿ: ಪಿಎಂ ಕಿಸಾನ್‌ ಸರ್ಕಾರದಿಂದ ಹೊಸ ಭಾಗ್ಯ ಬಿಡುಗಡೆ : ಈ ಬಾರಿ ರೈತರಿಗೆ ಸಿಗಲಿದೆ ದುಪ್ಪಟ್ಟು ಹಣ..!

ಸೂರ್ಯನ ಬೆಳಕು ಭೂಮಿಯನ್ನು ತಲುಪಲು ಸುಮಾರು 8 ನಿಮಿಷ 20 ಸೆಕೆಂಡ್‌ ಗಳು ಬೇಕು. ಭೂಮಿ ಸೂರ್ಯನನ್ನು ಸುತ್ತುವಂತೆ ಸೂರ್ಯ ಮಿಲ್ಕಿವೇ ಗ್ಯಾಲ್ಯಾಕ್ಸಿಯನ್ನು ಸುತ್ತುತ್ತಾನೆ. ಹಾಗೆ ತನ್ನ ಅಕ್ಷದ ಸುತ್ತ ಕೂಡ ತಿರುಗುತ್ತಿರುತ್ತಾನೆ. ಗ್ಯಾಲಾಕ್ಸಿಯ ಸುತ್ತ ಸೆಕೆಂಡ್‌ ಗೆ 200 ಕಿಲೋ ಮೀಟರ್‌ ವೇಗದಲ್ಲಿ ಸುತ್ತುತ್ತಾನೆ. ತನ್ನ ಅಕ್ಷದ ಸುತ್ತ 1 ರೌಂಡ್‌ ತಿರುಗುವುದಕ್ಕೆ 27 ದಿನಗಳ ತೆಗೆದುಕೊಳ್ಳುತ್ತಾನೆ.

ಸೂರ್ಯನ ಗಾತ್ರವೆಷ್ಟು? ನಮ್ಮ universe ನಲ್ಲಿ ಕೋಟ್ಯಾಂತರ ನಕ್ಷತ್ರಗಳಿವೆ. ಅದರಲ್ಲಿ ಸೂರ್ಯ ಕೂಡ ಒಂದು. ಸೂರ್ಯ ಸಮಗಾತ್ರವನ್ನು ಹೊಂದಿದ್ದಾನೆ. ಸೂರ್ಯನ 10 ನೇ 1 ಭಾಗದಷ್ಟು ಸಣ್ಣ ನಕ್ಷತ್ರಗಳು ಇವೆ, ಹಾಗೇ ಸೂರ್ಯನಿಗಿಂತ 700 ಪಟ್ಟು ಅಧಿಕ ಗಾತ್ರದ ನಕ್ಷತ್ರಗಳು ಇವೆ. ಸೂರ್ಯನ ಒಳಭಾಗ ಅಂದರೆ Core ಅತ್ಯಂತ ಬಿಸಿಯಾಗಿರುತ್ತದೆ. ಇಲ್ಲಿ ತಾಪಮಾನ 150 ಲಕ್ಷ‌ ಡಿಗ್ರಿ ಸೆಲ್ಸಿಯಸ್ ನಷ್ಟು ಇರುತ್ತದೆ. ಕೋರ್‌ ಗಿಂತ ಸೂರ್ಯನ ಮೇಲ್ಮೈ ಕೇವಲ 5,973 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ.

ಸೂರ್ಯನಿಗೆ ಶಕ್ತಿ ಎಲ್ಲಿದೆ ಬರುತ್ತದೆ. ಅತ್ಯಧಿಕ ಪ್ರಮಾಣದ ಹೈಡ್ರೋಜನ್‌ ಫ್ಯೂಜನ್‌ ನಿಂದ ಶಕ್ತಿ ಬರುತ್ತದೆ. ಅಗಾಧ ಪ್ರಮಾಣದಲ್ಲಿ ಶಾಖ ಹಾಗೂ ಬೆಳಕು ಉತ್ಪಾದನೆಯಾಗುತ್ತದೆ. 2 ಹೈಡ್ರೋಜನ್‌ ಗಳು ಸೇರಿ ಹೀಲಿಯಂ ಅನ್ನು ಉತ್ಪತ್ತಿ ಮಾಡುತ್ತದೆ. ಹೀಗೆ ಸೂರ್ಯ ತನ್ನ ಕೋರ್‌ ನಲ್ಲಿ 660 ಕೋಟಿ ಟನ್‌ ಅಷ್ಟು ಹೈಡ್ರೋಜನ್‌ ಹೀಲಿಯಂ ಆಗಿ ಉತ್ಪತ್ತಿಯಾಗುತ್ತದೆ. 40 ಲಕ್ಷಗಳಷ್ಟು ಬೆಳಕು ಉತ್ಪತ್ತಿಯಾಗುತ್ತದೆ.

ಸೂರ್ಯನ ಸುತ್ತಲೂ ಪೋಟೋಸ್ಪಿಯರ್‌ , ಕ್ರೋಮೋಸ್ಪಿಯರ್‌ ಮತ್ತು ಕರೋನಾ ಎನ್ನುವ 3 ಅನಿಲ ಪದರಗಳಿವೆ. ಪೋಟೋಸ್ಪಿಯರ್‌ ನಮಗೆ ಕಾಣುವ ಸೂರ್ಯನ ಮೇಲ್ಮೈ ಯಾಗಿದೆ, ಇಲ್ಲಿಂದ ಬೆಳಕು ಬಿಡುಗಡೆಯಾಗುತ್ತದೆ. ಸೂರ್ಯನ ಅತ್ಯಂತ ಹೊರ ಪದರವೇ ಕರೋರಾ. ಇದು ಹೈಡ್ರೋಜನ್‌ ಹಾಗೂ ಹೀಲಿಯಂ ಎನ್ನುವ ರಾಸಾಯನಿಕ ಧಾತುಗಳನ್ನು ಅಗಾಧ ಪ್ರಮಾಣದಲ್ಲಿ ಹೊಂದಿದೆ. ಹೈಡ್ರೋಜನ್‌ 74.9%, ಹೀಲಿಯಂ 23.08% ಇದೆ. ಆಮ್ಲಜನಕ 1% ಇದೆ. ಇಂಗಾಲ 0.3% ನಿಯಾನ್‌ 0.2% ಹಾಗೂ ಐರನ್‌ 0.2% ನಷ್ಟಿದೆ. ಯುನಿವರ್ಸ್‌ನ ಆರಂಭದ 20 ನಿಮಿಷಗಳಲ್ಲಿ 24 % ಇದ್ದ ಹೀಲಿಯಂ ಈಗ 60% ಆಗಿದೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಸೂರ್ಯಗ್ರಹಣ ಹೇಗೆ ಉಂಟಾಗುತ್ತದೆ ಎಂದು ನೋಡುವುದಾದರೆ. ಭೂಮಿ ಹಾಗೂ ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಉಂಟಾಗುತ್ತದೆ. ಸೂರ್ಯ ಮುಂದಿನ 500 ಕೋಟಿ ವರ್ಷಗಳ ನಂತರ ಸಾಯುತ್ತಾನೆ. ತನ್ನ ಕೋರ್‌ ನಲ್ಲಿರುವ ಹೈಡ್ರೋಜನ್‌ ಅನ್ನು ಬರ್ನ್‌ ಮಾಡಿದ ನಂತರ ಹೆಚ್ಚಿನ ಪ್ರಮಾಣದಲ್ಲಿ ಹೀಲಿಯಂ ಅನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಕೆಂಪು ಬೆಂಕಿ ಉಂಡೆಯಾಗುತ್ತದೆ. ನಂತರ ತನ್ನ ಶಕ್ತಿಯನ್ನು ಕಳೆದುಕೊಂಡ ಕೋರ್‌ ಸಣ್ಣದಾಗುತ್ತದೆ. ಸೂರ್ಯನ ಹೊರಭಾಗದಲ್ಲಿರುವ ಹೈಡ್ರೋಜನ್‌ ಗಾತ್ರದಲ್ಲಿ ದೊಡ್ಡದಾಗಿ ಎಲ್ಲಾ ಗ್ರಹಗಳನ್ನು ನಾಶ ಮಾಡುವ ಸಾಧ್ಯತೆ ಇದೆ. ಅನಂತರ ಸೂರ್ಯ ಯಾವುದೇ ಬೆಳಕು ಹಾಗೂ ಶಾಖವನ್ನು ಉತ್ಪತ್ತಿ ಮಾಡುವ ಬೆಳಕನ್ನು ಹೊಂದಿರುವುದಿಲ್ಲ. ಕೋರ್ ‌ ಶಕ್ತಿಯನ್ನು ಕಳೆದುಕೊಂಡ ನಂತರ ಇದನ್ನು ಶ್ವೇತಾ ಗುಚ್ಚ ಎಂದು ಕರೆಯಲಾಗುತ್ತದೆ. ಕೊನೆಗೆ ಸೂರ್ಯನ ಅಂತ್ಯವಾಗುತ್ತದೆ.

ಇತರೆ ವಿಷಯಗಳು:

ರಕ್ಷಾಬಂಧನದಂದು ಭರ್ಜರಿ ಆಫರ್! ಓಲಾ ಎಲೆಕ್ಟ್ರಿಕ್ ಹೊಸ ಸ್ಕೂಟರ್ ಬಿಡುಗಡೆ; ಇಂದೇ ಬುಕ್‌ ಮಾಡಿ, ಅಗ್ಗದ ದರದಲ್ಲಿ ಲಭ್ಯ

7ನೇ ವೇತನ ಆಯೋಗ: ಈ ಉದ್ಯೋಗಿಗಳ ಡಿಎಯಲ್ಲಿ ಭಾರೀ ಬದಲಾವಣೆ: ಮೋದಿ ಸರ್ಕಾರ

Leave A Reply